ನಾನಂತು ಬ್ಲಾಗ್ ಲೋಕಕ್ಕೆ ಹೊಸಬ. ಅನಾಮಿಕ ಬ್ಲಾಗ್‌ಗಳ ಕಲ್ಪನೆಯೂ ಹೊಸತೇ. ನಾನು ಈಗಷ್ಟೇ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಿದ್ದೇನೆ. ಆದರೆ ಅನಾಮಿಕ ಬ್ಲಾಗುಗಳು ಹಾಸಿಗೆ ದಾಟಿ ಕಾಲು ಚಾಚುತ್ತಿವೆ. ಕಾರಣ ಸ್ಪಷ್ಟ. ಈ ಬ್ಲಾಗುಗಳ ಕರ್ತೃಗಳು ಅನುಭವಿ ಬ್ಲಾಗರ್‌ಗಳು.
ಬ್ಲಾಗ್‌ಲೋಕದಲ್ಲಿ ದಿನಕ್ಕೊಂದರಂತೆ ಅನಾಮಿಕ ಬ್ಲಾಗುಗಳು ತಲೆ ಎತ್ತುತ್ತಿವೆ. ಒಂದರ್ಥದಲ್ಲಿ ಇವೂ ಲೋಕದ ಮಗ್ಗುಲ ಮುಳ್ಳುಗಳು. ಇವುಗಳ ಕುರಿತು ಚರ್ಚೆಯೂ ಆರಂಭವಾಗಿದೆ. ಅಣಕವೆಂದರೆ ಈ ಚರ್ಚೆಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರುವುದೂ ಅವರೆ!.
ಅತಿ ಹೆಚ್ಚು ಹಿಟ್ಟು ಗಳಿಸುವ ಬ್ಲಾಗುಗಳೂ ಇವುಗಳೇ. ಅತೀ ಹೆಚ್ಚು ಪ್ರತಿಕ್ರಿಯೆಗಳು ಪಡೆಯುವುದೂ ಇವುಗಳೇ. ಕಾಮೆಂಟ್ ಬರೆಯುವವರೂ ಅನಾಮಿಕರೇ.
'ಅನಾಮಿಕತೆ’ ಎನ್ನುವುದೇ ಹಾಗೆ. ಜನರಲ್ಲಿ ಸಹಜ ಕುತೂಹಲವನ್ನು ಸೃಷ್ಟಿಸುವ ಶಕ್ತಿ ಈ ಐದಕ್ಷರದ ಪದಕ್ಕೆ ಇದೆ. ಈ ಅನಾಮಿಕ ಯಾರು? ಎಂದು ಹುಡುವುದಕ್ಕೆ ಯಾರೂ ಹೋಗುವುದಿಲ್ಲವಾದರೂ ಅನಾಮಿಕ ಏನು ಮಾಡುತ್ತಿದ್ದಾನೆ ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೆ. ಅನಾಮಿಕತೆ ವ್ಯಕ್ತಿಗೂ ಕೂಡ ಹೆಚ್ಚಿನ ಸ್ವತಂತ್ರತೆಯನ್ನು ನೀಡುತ್ತದೆ. ಹೆಸರು ಹೇಳಿಕೊಂಡು ಬರೆಯಲಾರದ ಅಥವಾ ಹೇಳಲಾರದ ವಿಚಾರವನ್ನು ನಿರ್ಭಿಡೆಯಿಂದ ಹೇಳುತ್ತಾರೆ ಅಥವಾ ಬರೆಯುತ್ತಾರೆ. ಅನುಭವಿ ಬ್ಲಾಗರ್‌ಗಳು ತಮ್ಮ ಅನಾಮಿಕ ಬ್ಲಾಗುಗಳಲ್ಲಿ ಬರೆಯುತ್ತಿರುವುದೂ ಇದನ್ನೇ.
ಬ್ಲಾಗ್ ಎಂಬುದು ಒಬ್ಬ ವ್ಯಕ್ತಿಯ ಮುಖವಾಣಿ. ರಾಜಕೀಯ ಪಕ್ಷ, ಸಂಘಟನೆಗಳು ಅದರದ್ದೇ ಆದ ಮುಖವಾಣಿಯನ್ನು ಹೊಂದಿರುವಂತೆ, ಆಯಾ ವ್ಯಕ್ತಿಗಳು ತಮ್ಮ ಅಭಿಪ್ರಾಯ, ಸಿದ್ಧಾಂತಗಳನ್ನು ಬ್ಲಾಗುಗಳ ಮೂಲಕ ತೆರೆದಿಡುತ್ತಾರೆ. (ಇನ್ನೊಬ್ಬರ ಮೇಲೆ ಹೇರುತ್ತಾರೆ.)
ಅನಾಮಿಕ ಬ್ಲಾಗರ್‌ಗಳು ಮಾಡುತ್ತಿರುವುದೂ ಅದನ್ನೇ. ತಮಗೆ ಯಾವುದು ಹಿತವಾಗಿಲ್ಲವೋ ಅದರ ವಿರುದ್ಧ ಅಥವಾ ಆ ವ್ಯಕ್ತಿಯ ವಿರುದ್ಧ ಒಂದು ಲೇಖನ ಬರೆಯುತ್ತಾರೆ. ಅದಕ್ಕೊಂದಿಷ್ಟು ಹಿಟ್ಟುಗಳು. ಲೇಖನವನ್ನು ಮೆಚ್ಚಿ ಕೆಲವರು ಪ್ರತಿಕ್ರಿಯೆ ಬರೆದರೆ ಇನ್ನೊಂದಿಷ್ಟು ಜನ ಖಾರವಾಗಿ ಪ್ರತಿಕ್ರಿಯೆ ಬರೆಯುತ್ತಾರೆ(ಬೇರೆ ಬೇರೆ ಹೆಸರುಗಳಲ್ಲಿ ತಮ್ಮ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಬ್ಲಾಗರುಗಳೂ ಇದ್ದಾರೆ.)
ಅನಾಮಿಕ ಬ್ಲಾಗುಗಳಲ್ಲಿ ವಿಮರ್ಶಕರೆಲ್ಲಾ ವಿಮರ್ಶಕಿಗಳಾಗುತ್ತಾರೆ. ಒಬ್ಬರೇ ನಡೆಸುತ್ತಿದ್ದರೂ ನಮ್ಮದೊಂದು ತಂಡವಿದೆ ಎಂದು ಹೇಳಿಕೊಳ್ಳುತ್ತಾರೆ.
ಪ್ರತಿ ಕ್ಷೇತದಲ್ಲೂ ಇಂತಹ ಬ್ಲಾಗರುಗಳಿದ್ದಾರೆ, ಮಾಧ್ಯಮ ಕ್ಷೇತ್ರದಲ್ಲಿ , ಸಾಹಿತ್ಯ ಕ್ಷೇತ್ರದಲ್ಲಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅನಾಮಿಕರ ಬ್ಲಾಗುಗಳು ಇವೆ. ಈ ಬ್ಲಾಗುಗಳ ಬಗ್ಗೆ ಅದರಲ್ಲಿ ಆಗುವ ಚರ್ಚೆಯ ಬಗ್ಗೆ ಸಾಮಾನ್ಯ ಜನರಿಗೆ ತಿಳಿದಿರುವುದಿಲ್ಲ. ಕೇವಲ ಆಯಾ ಕ್ಷೇತ್ರದವರಿಗೆ ಮಾತ್ರ ಗೊತ್ತಿರುತ್ತದೆ.
ಉದಾಹರಣೆಗೆ ಮಾಧ್ಯಮ ಕ್ಷೇತ್ರವನ್ನು ತೆಗೆದುಕೊಂಡಾಗ, ಮಾಧ್ಯಮ ಮಂದಿಯ ಅನಾಮಿಕ ಬ್ಲಾಗುಗಳ ಬಗ್ಗೆ ಅದರಲ್ಲಿ ಆಗುತ್ತಿರುವ ಚರ್ಚೆಗಳ ಬಗ್ಗೆ ಕೇವಲ ಆ ಕ್ಷೇತ್ರದವರಿಗೆ ಮಾತ್ರ ಅರಿವಿದೆ. ಸಾಮಾನ್ಯ ಜನರಿಗೆ ಅಥವಾ ಇತರ ಕ್ಷೇತ್ರದವರಿಗೆ ಇದರ ಬಗ್ಗೆ ತಿಳಿದಿಲ್ಲ. ಇದು ಈ ಬ್ಲಾಗುಗಳ ಬಹು ದೊಡ್ಡ ಮಿತಿ. ಅವರ ಉದ್ದೇಶವೂ ಅಷ್ಟೇ ಇರುತ್ತದೆ. ಆ ಕ್ಷೇತ್ರದವರಿಗೆ ಮಾತ್ರ ತಮ್ಮ ಅಭಿಪ್ರಾಯಗಳನ್ನು ತಿಳಿಸುವುದು.
ಈ ಅನಾಮಿಕರನ್ನು ಕಂಡು ಹಿಡಿಯುವುದು ಕಷ್ಟದ ವಿಚಾರವೇನಲ್ಲ. ಅದಕ್ಕೆ ಒಂದಿಷ್ಟು ಸಮಯ ವ್ಯಯಿಸಿ ತಾಂತ್ರಿಕ ಶ್ರಮ ಹಾಕಿದರೆ ಆಯಿತು. ಆದರೆ ಅದನ್ನು ಮಾಡುವ ತಾಳ್ಮೆಯೂ ಅಗತ್ಯತೆಯೂ ಯಾರಿಗೂ ಇಲ್ಲ. ಯಾರಿಗೆ ಏನು ತೋಚತ್ತೋ ಅದನ್ನು ಹೇಳಲು ಬರೆಯಲು ಅವರು ಸ್ವತಂತ್ರರು. ಅದು ಅನಾಮಿಕರಾಗಿ ಬರೆದರೂ ಹೆಸರು ಹೇಳಿಕೊಂಡು ಬರೆದರೂ ವ್ಯತ್ಯಾಸವಿಲ್ಲ. ಈ ಬ್ಲಾಗುಗಳಲ್ಲಿ ಆರೋಗ್ಯಕರ ವಿಚಾರ ಚರ್ಚೆಯಾದರೆ ಅದರಿಂದ ಯಾರಿಗೂ ತೊಂದರೆಯಿಲ್ಲ. ಆದರೆ ಅಂತಹ ವಿಚಾರಗಳು ಚರ್ಚೆಯಾಗುತ್ತಿರುವುದು ಬಹಳ ಕಡಿಮೆ. ಅನಾರೋಗ್ಯಕರ ವಿಚಾರಗಳೇ ಈ ಬ್ಲಾಗುಗಳ ಜೀವಾಳವಾಗುತ್ತಿರುವುದು ಕೆಟ್ಟಬೆಳವಣಿಗೆ. ಇಂತಹುದಕ್ಕೆ ಅನಾಮಿಕರೇ ಸ್ವಯಂ ಆಗಿ ಕಡಿವಾಣ ಹಾಕಬೇಕು. ಆರೋಗ್ಯಕರ ವಿಚಾರ, ಆರೋಗ್ಯಕರ ಚರ್ಚೆಗಳಿದ್ದರೆ ಬ್ಲಾಗ್ ಲೋಕವೂ ಆರೋಗ್ಯಕರವಾಗುತ್ತದೆ. ಓದುಗರೂ ಕೂಡ.
ಕೊನೆಮಾತು: ಕೆಲವು ಅನಾಮಿಕ ಬ್ಲಾಗುಗಳು ’ಬೇಸತ್ತು’ ಲೋಕಕ್ಕೆ ವಿದಾಯ ಹೇಳುತ್ತಿವೆ. ಇನ್ನು ಕೆಲವು ಅಪ್‌ಡೇಟ್ ಹಾಗದೇ ಉಳಿದಿವೆ.
ಮಂಗಳವಾರ, ಸೆಪ್ಟೆಂಬರ್ 29, 2009
ಭಾನುವಾರ, ಸೆಪ್ಟೆಂಬರ್ 6, 2009
'ಪ್ರಕೃತಿ'ಯೊಂದಿಗೆ ಬೆರೆತ ಆ ದಿನಗಳು..
ತುಳು ಭಾಷೆಯಲ್ಲಿ ಒಂದು ಗಾದೆಯಿದೆ 'ಅಮಾಸ್ಯೆಗೊರ ಪುಣ್ಣಮೆಗೊರ......' ಅಂದರೆ ಅಮಾವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ .. ಅಂಥ.
ಆತ್ಮೀಯ ಮಿತ್ರನೊಬ್ಬ ಕೆಲ ದಿನಗಳ ಹಿಂದೆ ಫೋನ್ ಮಾಡಿದ್ದ. 'ಏನು ಮಾರಾಯ ನಿನ್ನ ಬ್ಲಾಗ್ ಅಪ್ಡೇಟ್ ಆಗ್ತಾ ಇಲ್ವಲ್ಲಾ ಅಂತ ಬೈಯ್ಯಲು ಶುರು ಹಚ್ಚಿದ. ಅದಕ್ಕೆ ಕಾರಣವೂ ಇತ್ತು. ಕಳೆದ ಒಂದು ತಿಂಗಳಿನಿಂದ ಹಲವು ಬಾರಿ ನನ್ನ ಬ್ಲಾಗಿಗೆ ಆತ ಇಣುಕಿ ನೋಡಿದ್ದಾನೆ. ಹೊಸ ಬರಹಗಳೇನು ಕಾಣಲಿಲ್ಲ. ಯಾವುದೇ ಬರಹಕ್ಕೆ ಒಂದು ಕಾಮೆಂಟನ್ನೂ ಆತ ಇದುವರೆಗೆ ಬರೆದಿಲ್ಲ. ಆದರೆ ಲೇಖನಗಳನ್ನು ಓದುತ್ತಾನೆ. ದೂರವಾಣಿಯ ಮೂಲಕ ಮುಖತಃ ಕಾಮೆಂಟ್ ನೀಡುತ್ತಾನೆ.
ಭಾರಿ ಉತ್ಸಾಹದಲ್ಲಿ ಬ್ಲಾಗ್ ಆರಂಭಿಸಿದ್ದೆ. ಹಲವು ವೃತ್ತಿ ಸ್ನೇಹಿತರು ಆಗಾಗ ಅಪ್ಡೇಟ್ ಮಾಡುತ್ತಿರಬೇಕು, ರಾಯರ ಕುದುರೆ ಕತ್ತೆ ಆಗಬಾರದು ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದರು. ಆರಂಭದಲ್ಲಿ ಅಗಸ ಬಟ್ಟೆ ಎತ್ತಿ ಎತ್ತಿ ಒಗೆದ ಎಂಬ ಗಾದೆ ಮಾತಿನಂತೆ ಪ್ರಾರಂಭದಲ್ಲಿ ವಾರಕ್ಕೊಂದು ಲೇಖನ ಬರೆಯುತ್ತಿದ್ದೆ. ಈಗ ಬರೆಯದೆ ಒಂದು ತಿಂಗಳಾಯಿತು.
ತಿಂಗಳಿಗೊಮ್ಮೆ ಹುಣ್ಣಿಮೆ ಬರುವಾಗ ನಾನು ಬರೆಯದೇ ಇರುವುದಾದರೂ ಹೇಗೆ....
ಎರಡು ವಾರಗಳ ಹಿಂದೆ ಊರಿಗೆ ಹೋಗಿದ್ದೆ. ಮಳೆಗಾಲವನ್ನು ಸವಿಯುವುದಕ್ಕಾಗಿ!. ಕಾಂಕ್ರೀಟ್ ಕಾಡಾದ ಬೆಂಗಳೂರಲ್ಲಿ ನಾಲ್ಕು ಹನಿ ನೀರು ಭೂಮಿಗೆ ಬಿದ್ದರೆ ಭಾರಿ ಮಳೆಯಾದಂತೆ ಭಾಸವಾಗುತ್ತದೆ. ಆಗ ಉಂಟಾಗುವ ಟ್ರಾಫಿಕ್ಜಾಮ್ ಏನು?, ನೀರು ರಸ್ತ್ತೆ ಮೇಲೆ ಹರಿದು ಸೃಷ್ಟಿಸುವ ಅವಾಂತರಗಳೇನು? ಮರ ಮುರಿದು ಬೀಳುವುದೇನು? ಗೋಡೆ ಕುಸಿವುದೇನು? ಕೊನೆಗೆ ಮೋರಿ ನೀರಿನಲ್ಲಿ ನಾಗರಿಕರು ಕೊಚ್ಚಿ ಹೋಗುವುದೇನು? ಹೀಗೆ ಬೆಂಗಳೂರಿನಲ್ಲಿ ಧೋ... ಎಂದು ಸುರಿಯುವ ಮಳೆ ಸಂತಸ ತರುವುದಕ್ಕಿಂತ ಜನರಲ್ಲಿ ಅಸಹನೆಯನ್ನೇ ಉಂಟುಮಾಡುತ್ತಿರುವಾಗ ಹಲವಾರು ಬಾರಿ ಇಲ್ಲಿ ಯಾಕಾದರೋ ಮಳೆ ಬರುತ್ತದೋ ಎಂದು ಯೋಚಿಸಿದ್ದೇನೆ. ಇದೇ ಯೋಚನೆ ಮೊನ್ನೆ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲೂ ಮನಸಿನ ಹಾದಿಯಲ್ಲೊಮ್ಮೆ ನಡೆದಾಡಿತು.
ಬೆಳ್ಳಂಬೆಳಗ್ಗೆ ಬೆಂದಕಾಳೂರಿನಿಂದ ಬಸ್ಸಲ್ಲಿ ಹೊರಟವನಿಗೆ ಮಳೆ ಸ್ವಾಗತಕೋರಿದ್ದು ಶಿರಾಡಿಘಾಟ್ನಲ್ಲಿ, ಹಚ್ಚ ಹಸಿರ ಹಾಸಿನಲ್ಲಿ ಮಳೆಯ ನೃತ್ಯವನ್ನು ನೋಡಿ ಆಸ್ವಾದಿಸುತ್ತಿದ್ದ ನನಗೆ ಗಬ್ಬೆದ್ದು ಹೋಗಿದ್ದ ಶಿರಾಡ್ ಘಾಟ್ ರಸ್ತೆಯಲ್ಲಿ ಬಸ್ಸು ನೃತ್ಯ ಮಾಡುತ್ತಿದ್ದುದು ಗಮನಕ್ಕೇ ಬರಲಿಲ್ಲ!.
ಅಲ್ಲಲ್ಲಿ ಕಾಣುತ್ತಿದ್ದ ಕೃತಕ ಜಲಪಾತಗಳು, ಹರಿಯುವ ತೊರೆಗಳು, ಪಟ್ ಪಟ್ ಎಂದು ಸ್ವರ ಹೊರಡಿಸಿ ಬೀಳುತ್ತಿದ್ದ ಮಳೆ ಹನಿಗಳನ್ನು ಬಸ್ಸಿನ ಕಿಟಕಿ ಗಾಜುಗಳನ್ನು ಸರಿಸಿ ನೋಡುತ್ತಿದ್ದಾಗಲೇ ಎದುರಿನ ಸೀಟಿನಲ್ಲಿದ್ದ ಎಲೆ ಅಡಿಕೆ ಮೆಲ್ಲುತ್ತಿದ್ದ ವೃದ್ಧೆಯೊಬ್ಬರು ಉಗಿದ ಎಲೆ ಅಡಿಕೆ ರಸ ಮಳೆ ನೀರಿನ ಜೊತೆ ಬೆರೆತು ಹೋಯಿತು.
ಮನೆ ತಲುಪವವರೆಗೂ ಮಳೆಯ ಸಿಂಚನ ಮುಂದುವರೆದಿತ್ತು. ಆ ದೃಶ್ಯ ವೈಭವವನ್ನು ಸವಿಯುತ್ತಿರುವಾಗ ಮನಸ್ಸಿನ ಮೂಲೆಯಲ್ಲಿ
.....ಬೆಚ್ಚಗೆ ಕುಳಿತಿದ್ದ ಬಾಲ್ಯದ ನವಿರಾದ ನೆನಪುಗಳು ಒಂದೊಂದಾಗಿ ಸ್ಮೃತಿ ಪಟಲದಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದವು.
ಮಳೆಗಾಲ ಅಂದರೆ ಆದೇನೋ ಖುಷಿ. ಮಳೆಗಾಲ ಆರಂಭವಾದಗಲೇ ಶಾಲೆ ಆರಂಭಗೊಳ್ಳುತ್ತಿದ್ದುದು ನನಗಂತೂ ಖುಷಿ ನೀಡುತ್ತಿತ್ತು.
ಅದುವರೆಗೂ ಬಿಸಿಲಿನ ಝಳಕ್ಕೆ ಕೆಂಪು ಕೆಂಪಾಗಿ ಬೆಂಡಾಗಿರುತ್ತಿದ್ದ ಮರ ಗಿಡಗಳು ಮಳೆ ಹನಿಯ ಸ್ಪರ್ಶಕ್ಕೆ, ನವ ವಧುವಿನಂತೆ ಹಚ್ಚ ಹಸುರಿನಿಂದ ಕಂಗಳಿಸಿ ಕಣ್ಣಿಗೆ ಮನಸ್ಸಿಗೆ ಮುದ ನೀಡುತ್ತಿದ್ದವು. ಸೂರ್ಯನ ತಾಪಕ್ಕೆ ಬೆನ್ನೊಡ್ಡಿ ಕಾದ ಕೆಂಡವಾಗಿರುತ್ತಿದ್ದ ಕರಿ ಬಂಡೆಗಳು ಮಳೆಗಾಲದಲ್ಲಿ ಹಾವಸೆಯ ಸ್ಪರ್ಶದ ಹಿತವನ್ನು ಅನುಭವಿಸುತ್ತಿದ್ದವು. ಪಕ್ಷಿಗಳು, ಪ್ರಾಣಿಗಳು ಕೂಡ ಮಳೆಗಾಲದ ಸವಿ ಅನುಭವಿಸುವುದನ್ನು ಕಣ್ಣಾರೆ ಕಾಣಬಹುದಿತ್ತು. ಶಾಲೆಯಿಂದ ಮನೆಗೆ ಬರವ ಹೊತ್ತು ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಆಟವಾಡುತ್ತಿದ್ದ ಸಂಭ್ರಮ ಒಂದೆಡೆಯಾದರೆ, ನೆನೆದು ಬಂದಾಗ ವಸ್ತ್ರದಲ್ಲಿ ತಲೆ ಒರಸುತ್ತಿದ್ದ ಸಂದರ್ಭದಲ್ಲಿ ಪ್ರೀತಿಯ ಬೈಗುಳದ ಜೊತೆಗೆ ಅಮ್ಮನ ಬೆಚ್ಚಗಿನ ಅಪ್ಪುಗೆ ಎಂದೆಂದಿಗೂ ಮರೆಯಲಾಗದ್ದು. ಮನೆಯ ಸುತ್ತಮುತ್ತ ಯಾವಾಗಲೂ ಇರುತ್ತಿದ್ದ ಮಬ್ಬು ಮಬ್ಬಾದ ವಾತಾವರಣ ಮನ ತುಂಬೆಲ್ಲಾ ಅಚ್ಚಳಿಯದ ನೆಂಪಿನ ಬುತ್ತಿಯನ್ನು ಕಟ್ಟಿಕೊಟ್ಟಿದೆ.
ಆಷಾಢದಲ್ಲಿ ಜಡಿ ಮಳೆ ಸುರಿಯುತ್ತಿದ್ದರೆ ಇತ್ತ ಮನೆಯೊಳಗೆ ಮಕ್ಕಳಿಗೆ(ನನಗಂತು) ಸಂಭ್ರಮ. ಕಪ್ಪಿಟ್ಟ ವಾತಾವರಣದಲ್ಲಿ ಮನೆಯೊಳಗೆ ಎಣ್ಣೆ ಕಜ್ಜಾಯದ ಪರಿಮಳ ಮೂಗಿಗೆ ಬಡಿಯುತ್ತಿತ್ತು. ಮಳೆಗಾಲಕ್ಕೂ ಹಲಸಿನ ಹಣ್ಣಿಗೂ ಎಲ್ಲಿಲ್ಲದ ನಂಟು ಮಳೆ. ಆರಂಭಗೊಳ್ಳುವುದಕ್ಕೆ ಮುನ್ನ ಹಲಸಿನ ಕಾಯಿಯಿಂದ ತಯಾರಿಸಿದ ಆಹಾರ ಉತ್ಪನ್ನಗಳು (ಈ ಬಗ್ಗೆ ಹಲವು ಲೇಖನಗಳು ಭಾಗಶಃ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ) ಮಳೆಗಾಲದಲ್ಲಿ ನಮ್ಮ ನಾಲಗೆಗೆ ರುಚಿ ಹತ್ತಿಸುತ್ತಿದ್ದವು. ಮಳೆಗಾಲದಲ್ಲಿ ಮಾತ್ರ ಹಲಸಿನ ಹಣ್ಣು ದೊರೆಯುತ್ತಿದ್ದರಿಂದ ಹಣ್ಣಿನಿಂದ ತಾಯಾರಿಸಿದ ತಿಂಡಿ ಕೂಡ ಮಳೆಗಾಲಕ್ಕೆ ಮಾತ್ರ ಮೀಸಲು. ಮತ್ತೆ ಅದರ ಸವಿ ಆಸ್ವಾದಿಸಲು ಮುಂದಿನ ವರ್ಷಗಾಲ ಬರಬೇಕು.....
ಇನ್ನೆಲ್ಲಿ ಆ ಬಾಲ್ಯ....ಇನ್ನೆಲ್ಲಿ ಆ ಸಂತಸ, ಆ ಉಲ್ಲಾಸ ಉತ್ಸಾಹ....
ಜೋರಾಗಿ ಬೀಸಿದ ಗಾಳಿಗೆ ಬಸ್ಸಿನ ಕಿಟಕಿಯ ಮೂಲಕ ಒಳಬಂದ ನೀರು ನನ್ನ ಮುಖದ ಮೇಲೆ ಬಿದ್ದು, ನೆನಪುಗಳ ನೃತ್ಯವನ್ನು ನಿಲ್ಲಿಸಿದವು. ಮಂದಹಾಸದಿಂದ ಕಣ್ಣೆತ್ತಿ ನೋಡಿದರೆ ನನ್ನೂರಲ್ಲಿ ನೀರು ನಿಂತ ನಿಲ್ದಾಣದಲ್ಲಿ ಬಸ್ ನಿಂತಿತ್ತು.
ಹ್ಞಾಂ.. ಈ ಲೇಖನ ಬರೆಯುವ ಹೊತ್ತಿಗೆ ಮಳೆಗಾಲ ಮುಗಿಯುತ್ತೆ ಅಂಥ ನನ್ನ ಗೆಳೆಯ ಚುಚ್ಚಿದ್ದ. ಆದರೆ ದೇವರು ದೊಡ್ಡವನು... ಮತ್ತೆ ಧೋ ಎಂದು ಮಳೆರಾಯ ಅರ್ಭಟಿಸುತ್ತಿದ್ದಾನೆ..
ಕೊನೆ ಮಾತು: ಉದ್ಯಾನನಗರಿಯಲ್ಲಿ ಜೀನ್ಸ್, ಟೀ-ಶರ್ಟ್, ಕೃತಕತೆಯನ್ನು ಕಂಡು ಕಂಡು ಕೆಂಪಾಗಿದ್ದ ನನ್ನ ಕಣ್ಣುಗಳು ಆ ಎರಡು ದಿನಗಳಲ್ಲಿ ಪ್ರಾಕೃತಿಕ ಸಹಜ ಸೌಂದರ್ಯವನ್ನು ಕಂಡು ತಂಪಾಗಿದ್ದವು!....

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)