ಬುಧವಾರ, ಏಪ್ರಿಲ್ 15, 2009

ಬಹುಮುಖ ಪ್ರತಿಭೆಗೆಗೆ ಅಂಧರ ಸೇವೆಯ ಹಂಬಲ



ಜೀವನದ್ಲಲಿ ಏನಾದರೊಂದು ಸಾಧನೆ ಮಾಡಬೇಕು ಎಂಬ ಛಲ ಹೊಂದಿದವರು ಹಲವು ಮಂದಿ ನಮ್ಮ್ಲಲ್ದಿದಾರೆ. ಆದರೆ ತಾನು ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎಂದು ಅಂದುಕೊಳ್ಳುವವರು ತುಂಬಾ ಕಡಿಮೆ.
ಯಾವತ್ತೂ ಕೆಲಸದ ಒತ್ತಡದ್ಲಲಿಯೇ ಕಾರ್ಯನಿರ್ವಹಿಸುವ ಇಂದಿನ ಜನರಿಗೆ ತಮ್ಮ ಕುಟುಂಬದವರ ಬಗ್ಗೆ ಯೋಚಿಸಲು ಸಮಯವಿರುವುದ್ಲಿಲ. ಅಂತಹುದರ್‍ಲಲಿ ಸಮಾಜದ ಬಗ್ಗೆ ಕುರಿತು ಯೋಚಿಸಲು ಸಮಯವಾದರೂ ಎಲಿರುತ್ತೆ ಹೇಳಿ?
ಆದರೆ ನಗರದ್ಲಲಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯ್ಲಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವೇಶ್ ಭಟ್, ಮೇಲೆ ಹೇಳಿರುವ ವಿಷಯಕ್ಕೆ ಅಪವಾದ. ಎಷ್ಟೇ ಕೆಲಸದ ಒತ್ತಡವ್ದಿದರೂ ಬಿಡುವಿನ ಸಮಯದ್ಲಲಿ ಹಲವಾರು ಕ್ರಿಯಾತ್ಮಕ ವಿಷಯಗಳ್ಲಲಿ ತೊಡಗಿಸಿಕೊಂಡ್ದಿದಾರೆ. ವೃತ್ತಿಯ ನಡುವೆಯೂ ಸಂಗೀತಗಾರನಾಗಿ, ವ್ಯಂಗ್ಯಚಿತ್ರಕಾರನಾಗಿ ಗಮನ ಸೆಳೆಯುತ್ತ್ದಿದಾರೆ.
ಮೂಲತಃ ಉಡುಪಿಯವರಾದ ವಿಶ್ವೇಶ್‌ಭಟ್ ಐಟಿ ಕ್ಷೇತ್ರದ್ಲಲಿ ವೃತ್ತಿಯನ್ನು ಕಂಡುಕೊಂಡ್ದಿದಾರೆ. ಇಲಿ ಮಾತ್ರವ್ಲಲದೇ ಅಮೆರಿಕದ್ಲಲಿ ಕೂಡ ಏಳು ವರ್ಷಗಳ ಕಾಲ ಸೇವೆ ಸ್ಲಲಿಸ್ದಿದಾರೆ. ಬಾಲ್ಯದ್ಲಲಿಯೇ ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸ್ದಿದಾರೆ. ಅಮೆರಿಕದ್ಲಲ್ದಿದಾಗ ತಮ್ಮ ಪತ್ನಿ ಅಶ್ವಿನಿ ಅವರ ಸಹಕಾರದೊಂದಿಗೆ ಮನೆಯ್ಲಲೇ ಸ್ವಂತ ರೆಕಾರ್ಡಿಂಗ್ ಸ್ಟುಡಿಯೋ ಸ್ಥಾಪಿಸಿ, ರಾಜ್ಯದ ಹೆಸರಾಂತ ಸಾಹಿತಿಗಳ ಹಾಡುಗಳಿಗೆ ಪಾಶ್ಚಿಮಾತ್ಯ ಸಂಗೀತ ಹಾಗೂ ಸಾಂಪ್ರದಾಯಿಕ ಸಂಗೀತ ಶೈಲಿಯ್ಲಲಿ ಸ್ವತಃ ರಾಗ ಸಂಯೋಜನೆ ಹಾಗೂ ಸಂಗೀತ ನೀಡಿ 'ಘಮ ಘಮ' ಎಂಬ ಆಲ್ಬಂ ರೂಪದ್ಲಲಿ ಹೊರ ತಂದ್ದಿದರು. `ಕ್ತಿ ಸಂಗೀತಕ್ಕೆ ಆ`ನಿಕ ಸಂಗೀತ ಸ್ಪರ್ಶ ನೀಡಿ 'ರಿಸರ್ಜೆನ್ಸ್' ಎಂಬ ಆಲ್ಬಂ ಹೊರತಂದ್ದಿದಾರೆ.
ಇತ್ತೀಚೆಗಷ್ಟೇ ಅಮೆರಿಕದಿಂದ ಹಿಂದಿರುಗಿರುವ ವಿಶ್ವೇಶ್ ಭಟ್ ಈಗ ಇನ್ನೊಂದು ಕಾರ್ಯದ್ಲಲಿ ನಿರತರಾಗ್ದಿದಾರೆ. ವ್ಯಂಗ್ಯಚಿತ್ರ ರಚನೆ, ವಿಶ್ವೇಶ್ ಭಟ್ ಅವರಿಗೆ ಬಾಲ್ಯದಿಂದಲೇ ಒಲಿದಿರುವ ಕಲೆ. ಪ್ರಾಥಮಿಕ ತರಗತಿಗಳ್ಲಲಿ ಕಲಿಯುತ್ತಿರುವಾಗಲೇ ವ್ಯಂಗ್ಯಚಿತ್ರವನ್ನು ರಚಿಸುತ್ತ್ದಿದೆ. ನಂತರ ಅದೇ ಹವ್ಯಾಸವಾಗಿ ಹೋಯಿತು ಎಂದು ಭಟ್ ಹೇಳುತ್ತಾರೆ. ಅವರ ವ್ಯಂಗ್ಯ ಚಿತ್ರಗಳು 'ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ' ಸೇರಿದಂತೆ ರಾಜ್ಯದ ಪ್ರಮುಖ ಪತ್ರಿಕೆ ಹಾಗೂ ಮಾಸಿಕಗಳ್ಲಲಿ ಪ್ರಕಟವಾಗಿವೆ. ಕೆಲಸದ ಒತ್ತಡದ ನಡುವೆ ಸಂಗೀತಕ್ಕೆ ಸಮಯ ಮೀಸಲಿಡಲು ಸಾಧ್ಯವಾಗುತ್ತ್ಲಿಲ ಎಂಬುದನ್ನು ಮನಗಂಡಿರುವ ಭಟ್ ಈಗ ಸಂಪೂರ್ಣವಾಗಿ ವ್ಯಂಗ್ಯಚಿತ್ರದತ್ತ ಮುಖಮಾಡ್ದಿದಾರೆ.
ಐಟಿಕ್ಷೇತ್ರವನ್ನು ಗುರಿಯಾಗಿಟ್ಟುಕೊಂಡು 'ಕಾಲ್-ಟೂನ್-೨೦೦೯' ಎಂಬ ವ್ಯಂಗ್ಯ ಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡ್ದಿದಾರೆ. ಇದರ್‍ಲಲೇನು ವಿಶೇಷವಿದೆ ಅಂತೀರಾ? ಕ್ಯಾಲೆಂಡರ್ ಮಾರಾಟದಿಂದ ಬಂದ ಹಣವನ್ನು 'ರಾಷ್ಟ್ರೀಯ ಅಂಧರ ಒಕ್ಕೂಟ'ಕ್ಕೆ ನೀಡಲು ನಿರ್ಧರಿಸ್ದಿದಾರೆ. ಆ ಮೂಲಕ ಅಂಧರ ಬಾಳನ್ನು ಬೆಳಗಿಸಲು ತನ್ನ ಕೈಲಾದಷ್ಟು ನೆರವಾಗುವ ಉದೇಶ ಅವರದು.
ಈ ಕ್ಯಾಲೆಂಡರ್‌ನ್ಲಲಿರುವ ವ್ಯಂಗ್ಯ ಚಿತ್ರಗಳ್ಲಲಿನ ವಿಶೇಷವೆಂದರೆ ಅವು ರಾಜಕೀಯ ಕುರಿತಾದವುಗಳ್ಲಲ. ಐಟಿ ಕ್ಷೇತ್ರವೇ ಅದಕ್ಕೆ ಮೂಲ ವಸ್ತು. ಆರ್ಥಿಕ ಹಿಂಜರಿತ, ಭಯೋತ್ಪಾದನೆ ಸಮಸ್ಯೆ, ಯುದ್ಧ ಭಯ, ವಿಶ್ವದ ಆರ್ಥಿಕತೆ ಮುಂತಾದ ಸಮಸ್ಯೆಗಳಿಂದ ಐಟಿ ಕ್ಷೇತ್ರದ ಮೇಲಾಗುತ್ತಿರುವ ಪರಿಣಾಮ, ಅದು ಎದುರಿಸುತ್ತಿರುವ ಸಂಕಷ್ಟ, ಐಟಿ ಉದ್ಯೋಗಿಯ ಸ್ಥಿತಿ, ಇಂತಹ ಹಲವಾರು ನಿದರ್ಶನಗಳನ್ನು ಮನಸ್ಸ್ಲಿಲಿಟ್ಟುಕೊಂಡು ೧೪ ವ್ಯಂಗ್ಯ ಚಿತ್ರಗಳನ್ನು ರಚಿಸ್ದಿದಾರೆ. ಒಂದು ವ್ಯಂಗ್ಯ ಚಿತ್ರ ಇನ್ನೊಂದಕ್ಕಿಂತ ಭಿನ್ನ.
ಸಾಫ್ಟ್‌ವೇರ್ ಉದ್ಯೋಗಿ, ಸಂಗೀತಜ್ಞ, ವ್ಯಂಗ್ಯಚಿತ್ರಕಾರ, ಸಮಾಜ ಸೇವಕ ಹೀಗೆ ಬಹುಮುಖ ಪ್ರತಿಭಾವಂತ ಅವರು.

-ವಜ್ರಾಂಗಿ ಸೂರ್ಯ

6 ಕಾಮೆಂಟ್‌ಗಳು:

KRISHNA ಹೇಳಿದರು...

ಬ್ಲಾಗ್ ಲೇ ಔಟ್, ಚಿತ್ರ ಬಳಕೆ, ಬರಹ ಎಲ್ಲಾ ಚೆನ್ನಾಗಿದೆ. ಬರಹವನ್ನು ಒಂದೇ ವಿಷಯಗಳಿಗೆ ಸೀಮಿತಗೊಳಿಸಬೇಡಿ. ವೈವಿಧ್ಯತೆ ಕಾಪಾಡಿಕೊಳ್ಳಿ, ನಿರಂತರ ಬರೆಯುತ್ತಲೇ ಇರಿ (ಏನನ್ನಾದರೂ, ವಿಷಯಕ್ಕೇ ಕಾಯ್ತಾ ಕೂರಬೇಡಿ). ಕಾಗುಣಿತದ ಕಡೆ ಗಮನ ಇರಲಿ. ಶುಭವಾಗಲಿ...

dayananda ಹೇಳಿದರು...

thumba chennagide

ಅನಾಮಧೇಯ ಹೇಳಿದರು...

keep it up...

SATHYANARAYANA BHAT ಹೇಳಿದರು...

Obba uttama kalavidananu parichayisiddakke dhanyavadagalu.... kep it up..
jotege bere type na articles bareyuttiri.. gud luck..

BHATJI ಹೇಳಿದರು...

ತುಂಬಾನೆ ಚೆನ್ನಾಗಿದೆ !!!!!!!!!!ಕೀಪ್ ಇಟ್ ಅಪ್ ಗಾಡ್ ಬ್ಲೆಸ್ಸ್ ಯು !!!!!!!

Karnataka Best ಹೇಳಿದರು...

antu ninu bloger agibitte