ನಾನು ಇದುವರೆಗೆ ಮಾಡಿದ ಬಹು ದೊಡ್ಡ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಸಹೋದ್ಯೋಗಿ ಮಿತ್ರರೊಬ್ಬರು ನಾನು ಬರೆದ "ಮನಸೇ ಮತ್ತೆ ಮತ್ತೆ ಕಾಡಬೇಡ ಪ್ಲೀಸ್" ಲೇಖನವನ್ನು ಓದಿ ನಿಮ್ಮ ಜೀವನದಲ್ಲಿ ನೀವು ಮಾಡಿದ ಬಹು ದೊಡ್ಡ ತಪ್ಪು ಇದೇ ಅನಿಸುತ್ತೆ ಅಂತ ಕೆಣಕಿದ್ದರು. ಅವರಿಗೆ ಅದು ನನ್ನ ಕಥೆಯಲ್ಲ ಸುಮ್ಮನೆ ಹಾಗೆ ಬರೆದೆ ಎಂದು ಹಲವು ಬಾರಿ ಹೇಳಿದ್ದೆನಾದರೂ ಅವರು ನಂಬಲು ಸಿದ್ದರಿರಲಿಲ್ಲ. (ಅವರು ಮಾತ್ರವಲ್ಲ ಆತ್ಮೀಯ ಸ್ನೇಹಿತರೂ ಕೂಡ ಲೇಖನ ಓದಿ ಇದೇ ಅಭಿಪ್ರಾಯವನ್ನು ಹೇಳಿದ್ದರು).
ವಿಷಯಾಂತರ ಮಾಡುತ್ತಿಲ್ಲ. ಸಾಹಿತ್ಯವನ್ನು ಓದಲು ಆರಂಭಿಸಿದ್ದೇನೆ. ಇದುವರೆಗೆ ಕನ್ನಡ ಸಾಹಿತ್ಯವನ್ನು ಓದದೇ ಇದ್ದುದು ನಾನು ಮಾಡಿದ ಮಹಾನ್ ತಪ್ಪು ಎಂಬುದು ಮನದಟ್ಟಾಗಿದೆ. ಓದದೇ ಇರುವುದಕ್ಕೂ ಕಾರಣವಿತ್ತು. ವಿದ್ಯಾರ್ಥಿ ಜೀವನದಲ್ಲಿ ವಿಜ್ಞಾನವನ್ನು ನಿರ್ದಿಷ್ಟ ವಿಷಯವನ್ನಾಗಿ ಆರಿಸಿಕೊಂಡಿದ್ದರಿಂದ ಸಾಹಿತ್ಯ,ದ ಕಡೆಗೆ ಗಮನಕೊಡಲಾಗಿಲ್ಲ ಎಂಬ ಕಾರಣವನ್ನು ಸಂಪೂರ್ಣವಾಗಿ ಒಪ್ಪತಕ್ಕದ್ದಲ್ಲ ಎಂದು ಹೇಳಿ ಹಿರಿಯ ಸಹೋದ್ಯೋಗಿಯೊಬ್ಬರು ಕಿವಿಹಿಂಡಿದ್ದರು. ನೀವು ಸಾಹಿತ್ಯವನ್ನು ಓದಲೇ ಬೇಕೆಂಬುದು ಅವರ ಪ್ರೀತಿಪೂರ್ವಕ ಹಕ್ಕೋತ್ತಾಯವಾಗಿತ್ತು. ನಾನೇ ಖುದ್ದಾಗಿ ನಿಮಗೊಂದು ಪುಸ್ತಕ ತಂದು ಕೊಡುತ್ತೇನೆ ಎಂದು ಹೇಳಿ ಕೆಲವು ವಾರಗಳ(!) ಬಳಿಕ ಓಶೋ ಅವರ ಪ್ರೇಮ ಧ್ಯಾನದ ಪಥದಲ್ಲಿ ಎಂಬ ಪುಸ್ತಕವನ್ನು ಕೈಗಿತ್ತರು.
ಇನ್ನೋರ್ವ ಸಹೋದ್ಯೋಗಿ ಮಿತ್ರರೊಬ್ಬರಿಗೆ (ಸಮಾನ ವಯಸ್ಕ) ಈ ವಿಷಯ ತಿಳಿಸಿದೆ. ನನ್ನನ್ನು ಕೆಣಕಲು ಅವರಿಗೆ ಇಷಯವೊಂದು ಸಿಕ್ಕಿತ್ತು ಅನ್ಸತ್ತೆ. ಏನ್ ಸೂರ್ಯ.... ೨೦ರ ಆಸುಪಾಸಿನಲ್ಲೆ ಓಶೋ ಅವರ ಪುಸ್ತಕವನ್ನು ಓದಲು ಶುರು ಮಾಡಿದ್ದೀರಿ? ಎಂದು ಪ್ರಶ್ನೆ ಕೇಳಿದರು ಹಾಗೆ ಸುಮ್ಮನೆ. ಪುಸ್ತಕದಲ್ಲಿನ ವಿಚಾರವೂ ಹಾಗಿತ್ತು. ಅಧ್ಯಾತ್ಮ, ಧ್ಯಾನ ಇವುಗಳೇ ಆ ಪುಸ್ತಕದಲ್ಲಿ ಆಗಾಗ ಪುನರಾವರ್ತನೆ ಆಗುತ್ತಿದ್ದ ಎರಡು ಪದಗಳು. (ಅದೇ ಪುಸ್ತಕದಲ್ಲಿ ಜೀವನದಲ್ಲಿ ಪ್ರೀತಿ, ಸ್ನೇಹ, ಮುಖವಾಡಗಳ ಕುರಿತೂ ಮಾಹಿತಿ ಇತ್ತು.) ಇವೆರಡೂ ಈ ವಯಸ್ಸಿನಲ್ಲಿ ಯಾಕೆ? ಎಂಬುದು ಅವರ ಪ್ರಶ್ನೆಯ ತಾತ್ಪರ್ಯವಾಗಿತ್ತು. (ಬಹುಶಃ ಆ ಪುಸ್ತಕವನ್ನು ಅವರು ಓದದಿದ್ದರೂ ಓಶೋ ಅವರ ಬೇರೆ ಪುಸ್ತಕಗಳನ್ನು ಓದಿರಬಹುದು. ಅದನ್ನು ನಾನು ಅವರಲ್ಲಿ ಕೇಳಲಿಲ್ಲ.)
ಅವರು ಏನಂದುಕೊಂಡರೋ ಏನೋ ಅವರ ಬ್ಯಾಗ್ನಿಂದ ಎರಡು ಪುಸ್ತಕಗಳನ್ನು ನನಗೆ ನೀಡಿ ಇದನ್ನು ಓದಿ ಎಂಬ ಸಲಹೆ ನೀಡಿದರು. ಪುಸ್ತಕ ತೆಳ್ಳಗೆ ಇದ್ದಿದ್ದರಿಂದ ಏನೂ ಮಾತಾಡದೆ ತೆಗೆದುಕೊಂಡೆ. ಪ್ರೇಮ ಧ್ಯಾನದ ಪಥದಲ್ಲಿ ಪುಸ್ತಕದಲ್ಲಿ ೨೦೦ ಚಿಲ್ಲರೆ ಪುಟಗಳಿದ್ದರೆ ಇವೆರಡೂ ಪುಸ್ತಕಗಳು ಒಟ್ಟು ಸುಮಾರು ೨೪೦ ಪುಸ್ತಕಗಳನ್ನು ಹೊಂದಿದ್ದವು. ಒಂದು ಪೂರ್ಣ ಚಂದ್ರ ತೇಜಸ್ವಿ ಅವರ ಕರ್ವಾಲೋ ಹಾಗೂ ಇನ್ನೊಂದು "ಅನಿಸುತಿದೆ ಯಾಕೋ ಇಂದು’ ಜಯಂತ ಕಾಯ್ಕಿಣಿ ಅವರ ತೂಫಾನ್ ಮೇಲ್.
ತೇಜಸ್ವಿ ಅವರು ತೆಗೆದಿರುವ ಛಾಯಾಚಿತ್ರಗಳ ಬಗ್ಗೆ, ಅವರ ಸಾಹಿತ್ಯದ ಬಗ್ಗೆ ದಿನಪತ್ರಿಕೆಯಲ್ಲಿ, ಸಾಹಿತ್ಯ ಪ್ರೇಮಿಗಳ ಮಾತುಗಳ ಮೂಲಕ ಕೇಳಿ ತಿಳಿದಿದ್ದೆ. ಕಾಯ್ಕಿಣಿಯವರು ಇತ್ತೀಚಿನವರು. ಅವರ ಬಗ್ಗೆಯೂ ಸ್ವಲ್ಪ ಗೊತ್ತಿದೆ.
ಈ ಎರಡು ಪುಸ್ತಕಗಳು ಕೈ ಸೇರೋ ಹೊತ್ತಿಗೆ ಓಶೋ ಅವರ ಪಥದಲ್ಲಿ ಅರ್ಧ ಓದಿ ಮುಗಿಸಿದ್ದೆ. ’ಪಥದಲಿ’ ಪುಸ್ತಕ ಕನ್ನಡಕ್ಕೆ ಅನುವಾದಗೊಂಡಿರುವಂತದು. ಅದರಲ್ಲಿರುವ ವಿಚಾರಗಳು ಮುದ ನೀಡಿತಾದರೂ, ಭಾಷಾಂತರ ಇಷ್ಟಾಗಲಿಲ್ಲ. ಓಶೋ ಅವರು ಹೇಳಿರುವ ಪ್ರತಿಯೊಂದು ವಿಚಾರವೂ ಚಿಂತನೆಗೆ ಹಚ್ಚುವಂತವು. ಅವರು ನೀಡುವ ಪ್ರತಿಯೊಂದು ಸಲಹೆಯು ಕೂಡ ನಮ್ಮ ಸಭ್ಯ ಜೀವನಕ್ಕೆ ನೆರವಾಗಬಲ್ಲುದು. ಆದರೆ ಅದನ್ನು ಜೀವನದಲ್ಲಿ ಅಳವಡಿಸಲು ದೃಢ ನಿಶ್ಚಯ ಬೇಕು, ಬದ್ಧತೆ ಬೇಕು.
ತೇಜಸ್ವಿಯವರ ಮೇಲಿದ್ದ ಸಹಜ ಕುತೂಹಲ ನನ್ನನ್ನು ಕಾರ್ವಾಲೋ ಕಡೆ ವಾಲುವಂತೆ ಮಾಡಿತು. ಮೊದಲ ಅಧ್ಯಾಯವನ್ನು ಓದುತ್ತಿರುವಾಗಲೇ ನಾನು ಎಂಥಾ ತಪ್ಪು ಮಾಡಿದ್ದೇನೆ ಎಂದನ್ನಿಸಿತು. ಪುಟದ ಮೊದಲ ಸಾಲೇ ನನ್ನನ್ನು ಆಕರ್ಷಿಸಿತು. ನವಿರಾದ ನಿರೂಪಣೆ ಆ ಪುಸ್ತಕವನ್ನು ಓದುವಂತೆ ಮಾಡುತ್ತದೆ. ಮಂದಣ್ಣ, ಕಿವಿ, ಜೇನ್ನೊಣ, ಹಳೆ ಜೀಪು, ಪ್ರತಿಯೊಂದು ಕೂಡ ನೆನಪಿನಂಗಳದಲ್ಲಿ ಉಳಿಯುವಂತೆ ತೇಜಸ್ವಿ ಬರೆದಿದ್ದಾರೆ. ಕೊನೆಗೆ ಒಂಚೂರು ಬೋರು ಹೊಡೆಸಿದರೂ ಓದಿಸಿಕೊಂಡು ಹೋಗಿತ್ತು. ಅಂತ್ಯದಲ್ಲಿ ಹಾರುವ ಓತಿ ಸಿಕ್ಕಿದ್ದರೆ ಚೆನ್ನಾಗಿತ್ತು ಅಂತ ನನಗೆ ಅನ್ನಿಸಿದ್ದು ಸುಳ್ಳಲ್ಲ. ಮಂದಣ್ಣ ಹಾಗೂ ಕರ್ವಾಲೋ, ಕಿವಿ ಮನಸ್ಸನ್ನು ಆಕರ್ಷಿಸಿದ ಮೂರು ಪಾತ್ರಗಳು. ಕರ್ವಾಲೋ ಓದಿ ಮುಗಿಸಿದ ತಕ್ಷಣ ಜೇನು ಕೃಷಿ ಮಾಡುವ ಆಲೋಚನೆ ಮನದಲ್ಲಿ ಮೂಡಿತಾದರೂ ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಜೇನು ಸಾಕಣೆ ಅಸಂಭವ ಎಂದು ತಕ್ಷಣ ಮನಸ್ಸು ಮೆದುಳಿಗೆ ಸೂಚನೆ ನೀಡಿ ನನ್ನ ಆಲೋಚನೆಗೆ ಬ್ರೇಕ್ ಹಾಕಿತು.
ತೂಫಾನ್ ಮೇಲ್ ಜಯಂತ ಕಾಯ್ಕಿಣಿ ಅವರ ಬಳಿಯಿರುವ ಸಾಹಿತ್ಯ ಶ್ರೀಮಂತಿಕೆಗೆ ಸಾಕ್ಷಿ ಈ ಪುಸ್ತಕ. ಅದರಲ್ಲಿ ೧೨ ಕಥೆಗಳಿವೆ. ಒಂದಕ್ಕಿಂತ ಒಂದು ಭಿನ್ನ. ಪ್ರತಿ ಕಥೆಯನ್ನು ಎರಡೆರಡು ಬಾರಿ ಓದಿದರೆ ಮಾತ್ರ ನಿಮಗೆ ಅರ್ಥವಾಗುವುದು. ಹೋಲಿಕೆ ಮಾಡುವ ಕೌಶಲ ಅವರಿಗೆ ದೈವದತ್ತವಾಗಿ ಒಲಿದಿರುವುದು ಪ್ರತಿ ಕತೆಯಲ್ಲೂ ಗೋಚರವಾಗುತ್ತದೆ.
ಇನ್ನು ಮುಂದೆ ಸಾಹಿತ್ಯ ಓದಬೇಕು ಎಂದು ಮೂರು ಪುಸ್ತಕಗಳನ್ನು ಓದಿ ಮುಗಿಸಿದಾಗ ತೀರ್ಮಾನಿಸಿದ್ದೆ.
ನನ್ನ ಸಾಹಿತ್ಯ ಓದಿಗೆಕಾರಣರಾದ ಇಬ್ಬರು ಸಹೋದ್ಯೋಗಿ ಮಿತ್ರರಿಗೆ ನಾನು ಕೃತಜ್ಞ.
ಶನಿವಾರ, ಜುಲೈ 18, 2009
ಭಾನುವಾರ, ಜೂನ್ 21, 2009
ಬಿಎಂಟಿಸಿ ಕುರಿತು ಒಂದಿಷ್ಟು....
ವಾರ್ಷಿಕೋತ್ಸವದ ಸಂಭ್ರಮ....
ರಾಜ್ಯದ ರಾಜಧಾನಿ.... ಅದೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ನಾನು ವಲಸೆ (!?) ಬಂದು ಒಂದು ವರ್ಷವಾಯ್ತು. ಮನೆಯವರು, ಸಂಬಂಧಿಕರು, ಗೆಳೆಯರೆಲ್ಲಾ ಸಿಕ್ಕಾಗ ಕೇಳುವುದೊಂದೆ. ಎಷ್ಟು ಸಂಪಾಸಿದೆ? ಬ್ಯಾಂಕ್ನಲ್ಲಿ ಬ್ಯಾಲೆಂನ್ಸ್ ಎಷ್ಟಿದೆ? ಎಂಬ ಪ್ರಶ್ನೆಗಳನ್ನೇ. ಹ್ಞಾ ಮರೆತಿದ್ದೆ..... ಬೆಂಗಳೂರು ನಿಂಗೆ ಹಿಡಿಸುತ್ತಾ? ಎಂಬ ಇನ್ನೊಂದು ಪ್ರಶ್ನೆಯನ್ನೂ ಕೇಳುತ್ತಾರೆ. ಅವರಿಗೆ ಏನು ಗೊತ್ತು... ಯಾವ ಪ್ರದೇಶಕ್ಕೂ ಹೊಂದಿಕೊಳ್ಳದವರು ಬೆಂಗಳೂರಿಗೆ ಹೊಂದಿಕೊಳ್ಳುತಾರೆ ಅಂಥ. ಒಂದು ವೇಳೆ ನಾವು ಹೊಂದಿಕೊಳ್ಳದಿದ್ದರೂ, ಬೆಂಗಳೂರೇ ನಮ್ಮನ್ನು ಹೊಂದಿಕೊಳ್ಳುವಂತೆ ಮಾಡುತ್ತದೆ. ಇಲ್ದಿದ್ರೆ ದೇಶದ ಮೂಲೆ ಮೂಲೆಯಿಂದ ಜನರು ಬಂದು ಇಲ್ಲಿ ನೆಲೆಕಂಡಿದ್ದು ಹೇಗೆ?. ಮಹಾ ಸಾಗರದಂತಿರುವ ಬೆಂಗಳೂರು ಬಂದ ಜನರನ್ನೆಲ್ಲಾ ತನ್ನ ಒಡಲಾಳದಲ್ಲಿ ತುಂಬಿಕೊಂಡಿದೆ. ಇನ್ನೂ ತುಂಬಿಕೊಳ್ಳುತ್ತಿದೆ.
ಬೆಳಗ್ಗೆ ಒಮ್ಮೆ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಸ್ಕೈ ವಾಕರ್ನಲ್ಲಿ ನಿಂತು ಸುತ್ತಲೂ ಒಮ್ಮೆ ದೃಷ್ಠಿ ಹಾಯಿಸಿ ನೋಡಿ....ಜನಸಾಗರದ ಹೊರತು ನಿಮಗೆ ಮತ್ತಿನ್ನೇನೂ ಕಾಣದು.ಒಂದು ವರ್ಷದಲ್ಲಿ ನಾನು ಪಡೆದ ಅನುಭವವಿದೆಯಲ್ಲಾ....ಜೀವನಾನುಭವ. ಅದಕ್ಕಿಂತ ದೊಡ್ಡ ಅನುಭವವಿಲ್ಲ ಎಂದು ಹಿರಿಯರು ಹೇಳುತ್ತಾರೆ. ಬೆಂಗಳೂರಿನಲ್ಲಿ ಪ್ರತಿ ದಿನ ನಾನು ಪಡೆದದ್ದು ಅದನ್ನೇ! ಉದ್ಯೋಗದ ನಿರೀಕ್ಷೆಯಲ್ಲಿ ಊರಿಂದ ಹೊರಟು ಬೆಂಗಳೂರಿಗೆ ತಲುಪಿದಾಗ ನನ್ನನ್ನು ಸ್ವಾಗತಿಸಿದ್ದು ಇಲ್ಲಿನ ಟ್ರಾಫಿಕ್ . ಮುಂಜಾವು ೪.೩೦ರ ಸಮಯ. ಸಿಲಿಕಾನ್ ಸಿಟಿಯ ಹೆಬ್ಬಾಗಿಲು ನೆಲಮಂಗಲಕ್ಕೆ ತಲುಪಿದ್ದೆ. ಆಗಷ್ಟೇ ನಿದ್ದೆಯಿಂದ ಎದ್ದು ಕಣ್ಣು ಉಜ್ಜುತ್ತಿದ್ದೆ. ಹಿಂದಿನಿಂದ ಮುಂದಿನಿಂದ ಕಿವಿ ತಮಟೆ ಹರಿಯುವಂತೆ ವಾಹನಗಳ ಹಾರ್ನ್ಗಳು ಆರ್ಭಟಿಸುತ್ತಿದ್ದವು. ಟಿವಿಯಲ್ಲಿ, ಪತ್ರಿಕೆಗಳಲ್ಲಿ ಇಲ್ಲಿನ ಟ್ರಾಫಿಕ್ ಬಗ್ಗೆ ತಿಳಿದಿದ್ದೆನಾದರೂ ಮೊದಲ ಸಲವೇ ಅದರ ಅನುಭವ ಆದೀತು ಅಂತ ಕನಸಿನಲ್ಲೂ ಆಲೋಚಿಸಿರಲಿಲ್ಲ. ಪ್ರಾತಃಕಾಲದಲ್ಲಿ ದೇವರ ಸ್ಮರಣೆ ಮಾಡಬೇಕಾದ ಹೊತ್ತಲ್ಲಿ ನಾನು ಸುಮಾರು ೨ ಗಂಟೆಗಳ ಕಾಲ ಟ್ರಾಫಿಕ್ನಲ್ಲಿ ಸಿಲುಕಿ ಒತ್ತಾಡುತ್ತಿದ್ದೆ.... ಆ ಮೊದಲ ದಿನದಿಂದ ಇಂದಿನವರೆಗೆ ಪ್ರತಿಯೊಂದು ದಿನವೂ ಒಂದಲ್ಲ ಒಂದು ಅನುಭವ ಪಡೆದಿದ್ದೇನೆ. ಎಲ್ಲವನ್ನೂ ಬರೆದರೆ ಸರಣಿ ಲೇಖನ ಆಗಬಹುದೇನೋ...
ಆದರೂ, ಬೆಂಗಳೂರು ಜನರ ಜೀವನಾಡಿ ಆಗಿರುವ ಬಿಎಂಟಿಸಿ ಬಗ್ಗೆ ಹೇಳಲೇಬೇಕು. ಬೆಂಗಳೂರು ಕುರಿತು ಮಾತನಾಡುವಾಗ ಬಿಎಂಟಿಸಿ ಕುರಿತು ಹೇಳದಿದ್ದರೆ ಅಥವಾ ಬರೆಯದಿದ್ದರೆ ಆ ಬರಹ ಅಪೂರ್ಣ ಎಂಬುದು ನನ್ನ ಭಾವನೆ. ನಿಮಗೂ ಹಾಗನ್ನಿಸಿರಬಹುದು.
ಬಿಎಂಟಿಸಿ ಎಂದರೆ ಏನು ಎಂದು ಬೆಂಗಳೂರಿನ ಸಾಮಾನ್ಯ ಜನತೆಗೆ ಅರ್ಥವಾಗುವುದಿಲ್ಲ. ಅದೇ ಬಿಟಿಎಸ್ ಅಂತ ಹೇಳಿ.. ತಟ್ಟನೆ ಗ್ರಹಿಸುತ್ತಾರೆ. ಅವರಿಗೆ ಬಿಎಂಟಿಸಿ ಇನ್ನೂ ಬಿಟಿಎಸ್. ಬೆಂಗಳೂರಿಗರ ಜೀವನಾಡಿ ಇದು. ಈ ಬಸ್ಗಳ ಹೊರತಾಗಿ ಬೆಂಗಳೂರ ಜನಜೀವನವನ್ನು ಊಹಿಸಲೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಈ ಬಸ್ಗಳು ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ.ಬೆಂಗಳೂರಿನ ಜನಜೀವನ ತಿಳಿಯಬೇಕಾದರೆ (ಹಾಗೂ ಪುಕ್ಕಟೆ ಮನರಂಜನೆ ಸಿಗಬೇಕಾದರೆ!) ನೀವು ಒಂದು ದಿನವಿಡೀ ಬಿಎಂಟಿಸಿ ಬಸ್ಸಲ್ಲಿ ಸುತ್ತಿದರೆ ಸಾಕು. ಬೇರೇನೂ ಮಾಡಬೇಕಿಲ್ಲ. ಕಳೆದ ಒಂದು ವರ್ಷದಿಂದ ಪ್ರತಿ ದಿನವೂ ಈ ಬಸ್ನಲ್ಲಿ ನಾನು ಪ್ರಯಾಣಿಸುತ್ತಿರುವುದರಿಂದ ಈ ಮಾತನ್ನು ನಾನು ಖಚಿತವಾಗಿ ಹೇಳಬಲ್ಲೆ.
ಒಂದು ಬಿಎಂಟಿಸಿ ಬಸ್ ಮಿನಿ ಬೆಂಗಳೂರಿಗೆ ಸಮ. ಅಲ್ಲಿ ಯಾರು ಇರುವುದಿಲ್ಲ ಹೇಳಿ. ಶೇ ೩೦.ತಮಿಳರು, ಶೇ ೨೦ ತೆಲುಗರು ಇನ್ನು ಹದಿನೈದು ಶೇ. ಮಲ್ಲುಗಳು (ಮಳಿಯಾಳಿಗಳು), ೫ ಪರ್ಸೆಂಟ್ ಹಿಂದಿ ಭಾಷಿಗರು ಇನ್ನುಳಿದವರು ಕನ್ನಡಿಗರು. (ವಿ.ಸೂ: ಈ ಅಂಕಿ ಅಂಶಗಳು ನನ್ನವು- ಹೆಚಚು ಕಮ್ಮಿ ಸರಿ ಇರಬಹುದು ಎಂಬುದು ನನ್ನ ಅನಿಸಿಕೆ) ಕಳ್ಳರು, ಪ್ರಾಮಾಣಿಕರು, ಜಗಳಗಂಟರು, ಹರಟಿಗರು, ಹೆಂಗರುಳಿನ ಯಜಮಾನರು (ಮಹಿಳೆಯರ ಬಗ್ಗೆ ಮೋಹ ಉಳ್ಳವರನ್ನು ನಾನು ಕರೆಯುವುದು ಹೀಗೆ!), ಕುಡುಕರು, ಪ್ರೇಮಿಗಳು-ಕಾಮಿಗಳು ಹೀಗೆ ಎಲ್ಲರೂ ಬಿಎಂಟಿಸಿ ಪ್ರಯಾಣಿಕರೇ.
ಬಸ್ಸಿಗೊಬ್ಬ/ಳು ಕಂಡಕ್ಟರ್. ಕೋಪ ದೇವತೆ ಅವರ ಮೂಗಿನ ತುದಿಯಲ್ಲಿ ನಲಿಯುತ್ತಿರುತ್ತಾಳೆ. ಎಷ್ಟು ಹೊತ್ತಿಗೂ ಅರಚುತ್ತಾ, ಬುಸುಗುಡುತ್ತಾ ಇರುತ್ತಾರೆ ಪ್ರಯಾಣಿಕರ ಬಳಿ ಚಿಲ್ಲರೆ ಇಲ್ಲದಿದ್ದರೆ ಅವರ ಅರಚಾಟ ಆರಂಭಗೊಳ್ಳುತ್ತದೆ ಇನ್ನು ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರೋ....ಒಬ್ಬೊಬ್ಬರು ಒಂದೊಂದು ರೀತಿ. ಕೆಲವರು ಜಗಳ ತೆಗೆಯುವುದಕ್ಕಾಗಿಯೇ ಬಸ್ಸಿಗೆ ಹತ್ತಿರುತ್ತಾರೆ. ಚಾಲಕ ಬಸ್ಸನ್ನು ನಿಲ್ದಾಣದಿಂದ ಸ್ವಲ್ಪ ಮುಂದಕ್ಕೆ ನಿಲ್ಲಿಸಿದರೆ ಸಾಕು. ಅದು ಜಗಳಕ್ಕೆ ನಾಂದಿ.
ಈ ಮೊಬೈಲ್ಗಳಲ್ಲಿ ಎಫ್ಎಂ, ಎಂಪಿತ್ರೀಗಳನ್ನು ಯಾಕಾದರೂ ತಂತ್ರಜ್ಞರು ಅಳವಡಿಸಿದರು ಎಂದು ಬಸ್ಸಲ್ಲಿ ಪ್ರಯಾಣಿಸುವಾಗ ನೀವು ತಲೆ ಚಚ್ಚಿಕೊಂಡಿರಬಹುದು. ಹಾಡನ್ನು ಕೇಳಲು ಹೆಡ್ಸೆಟ್ ಪ್ರತ್ಯೇಕವಾಗಿ ಇರುತ್ತದೆ. ಆದರೂ ಅದೇನು ಮಜಾ ಸಿಗುತ್ತೋ ಏನೋ.... ಹೆಡ್ ಸೆಟ್ ಇದ್ದರೂ ಬಸ್ಲ್ಲಿ ಲೌಡ್ ಸ್ಪೀಕರ್ನಲ್ಲಿಟ್ಟು ಹಾಡು ಕೇಳುತ್ತಾರೆ. ಹೀಗೆ ಯಾರಾದರು ಒಬ್ಬರು ಮಾಡಿದರೆ ಪರವಾಗಿಲ್ಲ. ಇಂಥ ಐದಾರು ಮಂದಿ ಬಸ್ಸಲ್ಲಿರುತ್ತಾರೆ. ಇದು ಸಾಲದೆಂಬತೆ ಚಾಲಕನೂ ಕೂಡ ರೇಡಿಯೋ ಚಾಲೂ ಮಾಡಿ, ಶಬ್ದ ಮಾಲಿನ್ಯದ ಪ್ರಮಾಣವನ್ನು ಇನ್ನೂ ಹೆಚ್ಚಿಸುತ್ತಾನೆ. ಆ ಬಸ್ಸಲ್ಲಿ ಪ್ರಯಾಣಿಸುವ ಸಂಗೀತ ಪ್ರೇಮಿ ಕೂಡ ಕಿವಿ ಮುಚ್ಚುವ ಪರಿಸ್ಥಿತಿ ಅಲ್ಲಿ ನಿರ್ಮಾಣವಾಗಿರುತ್ತದೆ.
ಜಗಳವನ್ನು ನೋಡಬೇಕಾದರೆ ನೀವು ಬಿಎಂಟಿಸಿಯಲ್ಲಿ ಪ್ರಯಾಣಿಸಬೇಕು. ಎದುರಿಗೆ ಸಿಗುವ (ಅಡ್ಡಾದಿಡ್ಡಿ ವಾಹನ ಓಡಿಸುವ) ವಾಹನಗಳ ಚಾಲಕರಿಗೆ ಬೈಗುಳದ ಮಂಗಳಾರತಿ ಎತ್ತುತ್ತಲೇ ಬಸ್ಸನ್ನು ಚಾಲನೆ ಮಾಡುತ್ತಿರುತ್ತಾನೆ. ಚಾಲಕನ ಆರತಿಗೆ ಮೊದಲು ಮುಖ ಒಡ್ಡುವವರು ಆಟೋ ಡ್ರೈವರ್ಗಳು. (ಅವರೇನೂ ಕಮ್ಮಿ ಇಲ್ಲ ಬಿಡಿ). ಇದೆಲ್ಲವುದರ ನಡುವೆ ಟ್ರಾಫಿಕ್ ಜಾಮ್. ಮತ್ತೆ ಹಾರ್ನ್ಗಳ ಸದ್ದು. ಕೊನೆಗೆ ನೀವು ಇಳಿಯಬೇಕಾದ ಸ್ಥಳ ಬಂದಾಗ, ಅಂತೂ ಹೇಗಾದರೂ ತಲುಪಿದೆನಲ್ಲಾ ಎಂಬ ಉದ್ಘಾರ ನಿಮ್ಮ ಮನಸಿನ ಮೂಲೆಯಲ್ಲಿ ಉಂಟಾಗಿ, ಬಸ್ಸಿನಲ್ಲಿ ನಡೆದ ಘಟನೆಗಳನ್ನು ನೆನೆದುಮುಗುಳ್ನಗೆ ಸಹಿತ/ರಹಿತ ಮುಖದೊಂದಿಗೆ ಬಸ್ಸಿನ ಮೆಟ್ಟಿಲು ಇಳಿವಾಗ ಎದುರಿಗೊಬ್ಬರು ಅವಸರದಿಂದ ತಳ್ಳಿಕೊಂಡು ಅರಚುತ್ತಾ ಬಸ್ಸಿಗೆ ಹತ್ತುತ್ತಿರುತ್ತಾರೆ!.
ಮನೆಯವರು ಸ್ನೇಹಿತರು, ಹಿತೈಷಿಗಳು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಮೊದಲು ಹೇಳಿದ್ದೆ. ಅವರ ಎಲ್ಲಾ ಪ್ರಶ್ನೆಗಳಿಗೆ ಹೇಗೂ ಉತ್ತರ ಕೊಟ್ಟಿದ್ದೆ. ಆದರೆ ಅವರು ಮತ್ತೊಂದು ಪ್ರಶ್ನೆನಾ ಮುಂದಿಡುತ್ತಾರೆ.
ಯಾವುದಾದರೂ ಹುಡುಗೀನಾ ನೋಡಿಟ್ಟಿದ್ದೀಯಾ ಬೆಂಗಳೂರಿನಲ್ಲಿ?
ಉತ್ತರ:???????!!!!!!!
ನಿಮ್ಮವ ವಜ್ರಾಂಗಿ ಸೂರ್ಯ

ಮಂಗಳವಾರ, ಮೇ 5, 2009
ಮರೆಯಲಾಗದ ಪ್ರಾಣೇಶರ ಹಾಸ್ಯಮಯೂರಿಯ ಸ್ಪರ್ಶ ಸುಖ

ಇತ್ತೀಚೆಗೆ ಊರಿಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಅಣ್ಣ ‘ಹಾಸ್ಯ ಮಯೂರಿ’ ಎಂಬ ಸಿ.ಡಿಯೊಂದನ್ನು ತಂದಿದ್ದ. ಸ್ಕಾರ್ಪಿಯೋ ವಾಹನದಲ್ಲಿ ಹೋಗಿದ್ದರಿಂದ ಬರುವಾಗ ಸಿಡಿಯನ್ನು ವಾಹನದಲ್ಲಿರುವ ಟಿ.ವಿ ಯಲ್ಲಿ ನೋಡಬಹುದೆಂಬ ಉದ್ದೇಶ ಅವನದು. (ಅವನೊಬ್ಬನೇ ವಾಹನ ಚಾಲನೆ ಮಾಡಬೇಕಾಗಿದ್ದರಿಂದ ಬೆಂಗಳೂರು ತಲುಪುವವರೆಗೆ ನಾವೆಲ್ಲಾ ಎಚ್ಚರದಿಂದ ಇರಲಿ ಎಂಬ ಆಲೋಚನೆಯೂ ಅವನಲ್ಲಿತ್ತು.) ಆ ಸಿಡಿ ಕವರ್ನಲ್ಲಿ ಪ್ರಾಣೇಶರ ಭಾವಚಿತ್ರ ಇದ್ದಿದ್ದರಿಂದ ಸ್ವಲ್ಪ ಮಟ್ಟಿನ ಕುತೂಹಲ ನನ್ನಲ್ಲಿತ್ತು. ಈ ಮೊದಲೇ ಅವರ ಹಲವಾರು ಕಾರ್ಯಕ್ರಮಗಳನ್ನು ನಾನು ಟಿ.ವಿಯಲ್ಲಿ ವೀಕ್ಷಿಸಿದ್ದೆ. ಪ್ರತಿ ಕಾರ್ಯಕ್ರಮದಲ್ಲಿ ಅವರು ಹೇಳಿದ ಜೋಕುಗಳನ್ನೇ ಮತ್ತೆ ಮತ್ತೆ ಹೇಳಿದರೂ, ಅಥವಾ ಘಟನೆಗಳನ್ನು ಉದಾಹರಿಸಿದರೂ ಅದು ನನಗೆ ಮತ್ತೆ ಮತ್ತೆ ನಗು ತರಿಸುತ್ತಿತ್ತೇ ವಿನಾಃ ಬೇಜಾರು ಹುಟ್ಟಿಸುತ್ತಿರಲಿಲ್ಲವಾದ್ದರಿಂದ ಆ ಸಿಡಿ ಒಳಗೆ ಏನಿರಬಹುದು ಎಂಬ ಕುತೂಹಲ ನನ್ನಲ್ಲಿತ್ತು. ಮನೆಯಿಂದ ಹೊರಟ ಕೂಡಲೇ ಮೊದಲು ನಾನು ಅಣ್ಣನಿಗೆ ನೀಡಿದ ಸಲಹೆ ಒಂದೇ ‘ಆ ಸಿಡಿನ ಪ್ಲೇ ಮಾಡು’.ಸಿಡಿ ಪ್ಲೇ ಆಯಿತಾದರೂ ನಮ್ಮ ರಾಷ್ಟ್ರೀಯ ಹೆದ್ದಾರಿ ೪೮ರ ಗುಣಮಟ್ಟ ಅತ್ಯುತ್ತಮವಾಗಿದ್ದರಿಂದ (?!!!) ಸಿಡಿಯನ್ನು ಸರಿಯಾಗಿ ವೀಕ್ಷಿಸಲಾಗಲಿಲ್ಲ. ಹೆದ್ದಾರಿ ಪ್ರಾಧಿಕಾರ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನೂ ಎಲ್ಲರೂ ಹೊಗಳಿದ್ದೇ ಹೊಗಳಿದ್ದು!. ಆ ಸಿಡಿ ಕುರಿತಾದ ಚರ್ಚೆ, ಮಾತುಕತೆಯಿಂದ ಯಾರಿಗೂ ನಿದ್ದೆ ಬರದಿದ್ದರಿಂದ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದೂ ಆಯಿತು.
ಮರುದಿನ ಬೆಳಗ್ಗೆ ಎದ್ದಕೂಡಲೇ ನಾನು ಕುಳಿತಿದ್ದು ಟಿ.ವಿ. ಹತ್ತಿರ, ಪ್ರಾಣೇಶರ ಹಾಸ್ಯಮಯೂರಿಯ ಆಲಿಂಗನದ ಸುಖ ಸವಿಯಲು.....
ಮಾತೆಯರು ಎಲ್ಲಿರುತ್ತಾರೋ ಅಲ್ಲಿ ಬರೀ ಮಾತೇ... ಎನ್ನುವ ಮೂಲಕ ತಮ್ಮ ಮಾತನ್ನು ಪ್ರಾರಂಭಿಸುವ ಪ್ರಾಣೇಶ್ ನಮಗೆ ಇಷ್ಟ ಆಗುವುದು ಅವರ ವಿನಯತೆಯಿಂದ.. ತಮ್ಮನ್ನು ಆಧುನಿಕ ಬೀಚೀ, ಅಭಿನವ ಬೀಚೀ, ಅಥವಾ ಗಂಗಾವತಿ ಬೀಚೀ ಎಂದು ದಯವಿಟ್ಟು ಸಂಭೋದಿಸಬೇಡಿ ಎಂದು ನಯವಾಗಿ ಹೇಳುತ್ತಾರೆ. ನನ್ನನ್ನು ಬೀಚೀ ಅವರ ಸಾಹಿತ್ಯದ ಪ್ರಚಾರಕ ಅಂತ ಕರೆದರೆ ಸಾಕು ಎನ್ನುವುದು ಅವರು ಪ್ರೇಕ್ಷಕರಲ್ಲಿ ಮಾಡುವ ಮನವಿ.
ಆ ಸಿಡಿಯಲ್ಲಿ ಅವರು ಹೇಳಿರುವ ಕೆಲವು ವಿಚಾರಗಳು ನನಗೆ ಖುಷಿ ಕೊಟ್ಟಿವೆ....ಅದರಲ್ಲಿ ಕೆಲವು ಇಲ್ಲಿ ಬರೆದಿದ್ದೇನೆ.ಚುಟುಕು ಸಾಹಿತ್ಯವೂ ಕೂಡ ಸಮಾಜದ ಓರೆ ಕೋರೆ ತಿದ್ದುವಲ್ಲಿ ಪರಿಣಾಮಕಾರಿಯಾಗಬಲ್ಲುದು ಎಂಬುದನ್ನ ಕನ್ನಡದ ಹಲವಾರು ಚುಟುಕು ಸಾಹಿತಿಗಳು ರಚಿಸಿರುವ ಸಾಹಿತ್ಯವನ್ನು ಉದಾಹರಿಸುತ್ತಾರೆ ಪ್ರಾಣೇಶ್.
ತಾತಾ
ತಾತಾ
ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟೊದ್ದು ಗಾಂಧಿ ತಾತಾ
ಆದ್ದರಿಂದ ಸ್ವತಂತ್ರ ಭಾರತದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ
ಕೈ ನೀಡಿ ಕೇಳುತ್ತಾರೆ ತಾ...ತಾ.....ತಾ...!
ಆದರ್ಶ
ಗಾಂಧೀಜಿ ಪ್ರತಿಮೆಯನ್ನು ನಗರಗಳಲ್ಲಿರುವ ವೃತ್ತ, ಜಂಕ್ಷನ್ಗಳಲ್ಲಿನಿಲ್ಲಿಸಲಾಗಿದೆ
ಯಾಕೆಂದರೆ ಅವರ ಆದರ್ಶ ಪಾಲನೆಯನ್ನೂ ನಿಲ್ಲಿಸಲಾಗಿದೆ!
ಸೇಬು-ಸೀತಾಫಲ
ನನ್ನವಳ ಕೆನ್ನೆ ಸೇಬು..
ಮೊಡವೆಗಳಾದ್ದರಿಂದ ಸೀತಾಫಲ!
ಇನ್ನೂ ಹೆಚ್ಚು ಮೊಡವೆಗಳಿದ್ದರೆ?
.....ಹಲಸಿನ ಹಣ್ಣು!!! (ಕೊನೆಯ ವಾಕ್ಯ ರಚಿಸಿದ್ದು ನಾನು)
ಶಬ್ದ ದಾರಿದ್ರ್ಯದ ಕುರಿತು ಮಾತನಾಡುವಾಗ ಪ್ರಾಣೇಶ್ ‘ಅ’ಕಾರ ಮತ್ತು ‘ಹ’ಕಾರದ ಕುರಿತು ಮಾತನಾಡುತ್ತಾರೆ.ಇದಕ್ಕೆ ಅವರು ನೀಡುವ ಉದಾಹರಣೆ ಟಿವಿ ನಿರೂಪಕಿಯೊಬ್ಬಳದು..ಯುಗಾದಿ ಹಬ್ಬದಂದು ವಿಶೇಷ ಕಾರ್ಯಕ್ರಮದ ನಿರೂಪಕಿ ಹೇಳುವುದು ಹೀಗೆ...
ಅಲೋ......ಹಿಂದು ಹುಗಾದಿ ಅಬ್ಬ. ಅಬ್ಬ ಬಂತೆಂದರೆ, ಎಣ್ಣುಮಕ್ಕಳಿಗೆ ಇಗ್ಗೋ ಇಗ್ಗೋ...
ಅಲೋ......ಹಿಂದು ಹುಗಾದಿ ಅಬ್ಬ. ಅಬ್ಬ ಬಂತೆಂದರೆ, ಎಣ್ಣುಮಕ್ಕಳಿಗೆ ಇಗ್ಗೋ ಇಗ್ಗೋ...
ಭಾರತೀಯ ಎಣ್ಣುಮಕ್ಕಳು ಹಾದರ, ಹಾತಿಥ್ಯಕ್ಕೆ ಎಸರುವಾಸಿ!
(ಎಲ್ಲಿ ‘ಅ’ಕಾರ ಬೇಕೋ ಅಲ್ಲಿ ಅದನ್ನು ಬಳಸಿಲ್ಲ. ಎಲ್ಲಿ ‘ಅ’ಕಾರ ಬೇಡವೋ ಅಲ್ಲಿ ಬಳಸಿದ್ದಾಳೆ.)
ಟಿ.ವಿಯಿಂದಾಗಿ ಮಕ್ಕಳಲ್ಲಿ ಕ್ರಿಯಾತ್ಮಕತೆ ಕಡಿಮೆಯಾಗುತ್ತಿದೆ ಎಂಬುದು ಪ್ರಾಣೇಶರ ಅಳಲು. ಅದಕ್ಕೊಂದು ಅವರು ಉದಾಹರಣೆ ಕೊಡುತ್ತಾರೆ.
ಟಿ.ವಿಯಿಂದಾಗಿ ಮಕ್ಕಳಲ್ಲಿ ಕ್ರಿಯಾತ್ಮಕತೆ ಕಡಿಮೆಯಾಗುತ್ತಿದೆ ಎಂಬುದು ಪ್ರಾಣೇಶರ ಅಳಲು. ಅದಕ್ಕೊಂದು ಅವರು ಉದಾಹರಣೆ ಕೊಡುತ್ತಾರೆ.
ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ನೀಡಿದ ಪ್ರಶ್ನೆ. ಭೀಮನು ದುರ್ಯೋದನನನ್ನು ಹೇಗೆ ಕೊಂದನು? ಎರಡು ಪುಟಕ್ಕೆ ಮೀರದಂತೆ ಉತ್ತರಿಸಿ ಎಂಬ ಪ್ರಶ್ನೆಗೆ..ವಿದ್ಯಾರ್ಥಿಯ ಉತ್ತರ ಹೀಗಿದೆ.
ಭೀಮನು ದುರ್ಯೋಧನನನ್ನು ಗುದ್ದಿ, ಗುದ್ದಿ, ಗುದ್ದಿ.. ಹೀಗೆ ಎರಡು ಪುಟ ಬರೆದು ನಂತರ ಕೊನೆಗೆ ಗುದ್ದಿ ಗುದ್ದಿ ಕೊಂದನು.!
ವಯಸ್ಕ ಹೆಂಗಸರ ಮೇಲೆ ಪ್ರಾಣೇಶರಿಗೆ ಗೌರವ ಜಾಸ್ತಿಯಂತೆ.. ಅದಕ್ಕೆ ಕಾರಣ ಅವರ ಜೀವನಾನುಭವ.
ಹುಡುಗಿಯರು ಹಸಿದ್ರಾಕ್ಷಿ
ಹುಡುಗಿಯರು ಹಸಿದ್ರಾಕ್ಷಿ
ಗೃಹಿಣಿಯರು ಒಣದ್ರಾಕ್ಷಿ
ಹಾಗಾದರೆ ಮುದುಕಿಯರು?
........................... ರುದ್ರಾಕ್ಷಿ!!!
ಎಂದು ಹೇಳಿ ಪ್ರಾಣೇಶ್ ತಮ್ಮ ಹಾಸ್ಯ ಲಹರಿಗೆ ಮಂಗಳ ಹಾಡುತ್ತಾರೆ. ಇಲ್ಲಿ ಕೆಲವನ್ನು ಮಾತ್ರ ನಾನು ಬರೆದಿದ್ದೇನೆ. ಇನ್ನೂ ಹಲವಾರು ವಿಚಾರಗಳನ್ನು ಪ್ರಾಣೇಶ್ ಹೇಳಿದ್ದಾರೆ. ಒಂದು ಗಂಟೆ ಅವಧಿಯ ಹಾಸ್ಯಮಯೂರಿ ಪ್ರತಿಯೊಬ್ಬರ ಮನದಲ್ಲಿ ನಗುವಿನ ನೃತ್ಯ ಮಾಡಿಸುವುದರಲ್ಲಿ ಅನುಮಾನವಿಲ್ಲ. ಅದರಲ್ಲಿ ಬರುವ ಹಲವು ದೃಷ್ಟಾಂತಗಳನ್ನು ಪ್ರಾಣೇಶ್ ಅವರು ಈ ಹಿಂದೆ ಹಲವಾರು ಬಾರಿ ಹೇಳಿದ್ದಾರೆ. ಇಲ್ಲಿ ಮತ್ತೆ ಪನರಾವರ್ತಿಸಿದ್ದಾರೆ. ಅದರೂ ಅವು ಬೇಜಾರು ತರಿಸುವುದಿಲ್ಲ. ಕಾರಣ ಅವರು ಆಡುವ ಭಾಷೆ. ಉತ್ತರ ಕರ್ನಾಟಕದ ಭಾಷೆಗೆ ಆ ಶಕ್ತಿ ಇದೆ.
ಎಲ್ಲಿಯಾದರೂ ಆ ಸಿಡಿ ನಿಮಗೆ ಕಂಡರೆ ಹಾಗೆ ಸುಮ್ಮನೆ ಕಣ್ಣಾಡಿಸಿ, ಹಾಸ್ಯಮಯೂರಿಗೆ ನೀವು ಶರಣಾಗದಿದ್ದರೆ ಅಥವಾ ಅದರ ಸ್ಪರ್ಶ ನಿಮಗೆ ಹಿತಕರವಾಗದಿದ್ದರೆ ಹೇಳಿ.
ವಜ್ರಾಂಗಿ ಸೂರ್ಯ
(ಚಿತ್ರ ಕೃಪೆ: ಅಂತರ್ಜಾಲ-ಗೂಗಲ್ ನೆಟ್ವರ್ಕ್)
ಬುಧವಾರ, ಏಪ್ರಿಲ್ 15, 2009
ಬಹುಮುಖ ಪ್ರತಿಭೆಗೆಗೆ ಅಂಧರ ಸೇವೆಯ ಹಂಬಲ

ಜೀವನದ್ಲಲಿ ಏನಾದರೊಂದು ಸಾಧನೆ ಮಾಡಬೇಕು ಎಂಬ ಛಲ ಹೊಂದಿದವರು ಹಲವು ಮಂದಿ ನಮ್ಮ್ಲಲ್ದಿದಾರೆ. ಆದರೆ ತಾನು ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಎಂದು ಅಂದುಕೊಳ್ಳುವವರು ತುಂಬಾ ಕಡಿಮೆ.
ಯಾವತ್ತೂ ಕೆಲಸದ ಒತ್ತಡದ್ಲಲಿಯೇ ಕಾರ್ಯನಿರ್ವಹಿಸುವ ಇಂದಿನ ಜನರಿಗೆ ತಮ್ಮ ಕುಟುಂಬದವರ ಬಗ್ಗೆ ಯೋಚಿಸಲು ಸಮಯವಿರುವುದ್ಲಿಲ. ಅಂತಹುದರ್ಲಲಿ ಸಮಾಜದ ಬಗ್ಗೆ ಕುರಿತು ಯೋಚಿಸಲು ಸಮಯವಾದರೂ ಎಲಿರುತ್ತೆ ಹೇಳಿ?
ಆದರೆ ನಗರದ್ಲಲಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿಯ್ಲಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವೇಶ್ ಭಟ್, ಮೇಲೆ ಹೇಳಿರುವ ವಿಷಯಕ್ಕೆ ಅಪವಾದ. ಎಷ್ಟೇ ಕೆಲಸದ ಒತ್ತಡವ್ದಿದರೂ ಬಿಡುವಿನ ಸಮಯದ್ಲಲಿ ಹಲವಾರು ಕ್ರಿಯಾತ್ಮಕ ವಿಷಯಗಳ್ಲಲಿ ತೊಡಗಿಸಿಕೊಂಡ್ದಿದಾರೆ. ವೃತ್ತಿಯ ನಡುವೆಯೂ ಸಂಗೀತಗಾರನಾಗಿ, ವ್ಯಂಗ್ಯಚಿತ್ರಕಾರನಾಗಿ ಗಮನ ಸೆಳೆಯುತ್ತ್ದಿದಾರೆ.
ಮೂಲತಃ ಉಡುಪಿಯವರಾದ ವಿಶ್ವೇಶ್ಭಟ್ ಐಟಿ ಕ್ಷೇತ್ರದ್ಲಲಿ ವೃತ್ತಿಯನ್ನು ಕಂಡುಕೊಂಡ್ದಿದಾರೆ. ಇಲಿ ಮಾತ್ರವ್ಲಲದೇ ಅಮೆರಿಕದ್ಲಲಿ ಕೂಡ ಏಳು ವರ್ಷಗಳ ಕಾಲ ಸೇವೆ ಸ್ಲಲಿಸ್ದಿದಾರೆ. ಬಾಲ್ಯದ್ಲಲಿಯೇ ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಅಭ್ಯಸಿಸ್ದಿದಾರೆ. ಅಮೆರಿಕದ್ಲಲ್ದಿದಾಗ ತಮ್ಮ ಪತ್ನಿ ಅಶ್ವಿನಿ ಅವರ ಸಹಕಾರದೊಂದಿಗೆ ಮನೆಯ್ಲಲೇ ಸ್ವಂತ ರೆಕಾರ್ಡಿಂಗ್ ಸ್ಟುಡಿಯೋ ಸ್ಥಾಪಿಸಿ, ರಾಜ್ಯದ ಹೆಸರಾಂತ ಸಾಹಿತಿಗಳ ಹಾಡುಗಳಿಗೆ ಪಾಶ್ಚಿಮಾತ್ಯ ಸಂಗೀತ ಹಾಗೂ ಸಾಂಪ್ರದಾಯಿಕ ಸಂಗೀತ ಶೈಲಿಯ್ಲಲಿ ಸ್ವತಃ ರಾಗ ಸಂಯೋಜನೆ ಹಾಗೂ ಸಂಗೀತ ನೀಡಿ 'ಘಮ ಘಮ' ಎಂಬ ಆಲ್ಬಂ ರೂಪದ್ಲಲಿ ಹೊರ ತಂದ್ದಿದರು. `ಕ್ತಿ ಸಂಗೀತಕ್ಕೆ ಆ`ನಿಕ ಸಂಗೀತ ಸ್ಪರ್ಶ ನೀಡಿ 'ರಿಸರ್ಜೆನ್ಸ್' ಎಂಬ ಆಲ್ಬಂ ಹೊರತಂದ್ದಿದಾರೆ.
ಇತ್ತೀಚೆಗಷ್ಟೇ ಅಮೆರಿಕದಿಂದ ಹಿಂದಿರುಗಿರುವ ವಿಶ್ವೇಶ್ ಭಟ್ ಈಗ ಇನ್ನೊಂದು ಕಾರ್ಯದ್ಲಲಿ ನಿರತರಾಗ್ದಿದಾರೆ. ವ್ಯಂಗ್ಯಚಿತ್ರ ರಚನೆ, ವಿಶ್ವೇಶ್ ಭಟ್ ಅವರಿಗೆ ಬಾಲ್ಯದಿಂದಲೇ ಒಲಿದಿರುವ ಕಲೆ. ಪ್ರಾಥಮಿಕ ತರಗತಿಗಳ್ಲಲಿ ಕಲಿಯುತ್ತಿರುವಾಗಲೇ ವ್ಯಂಗ್ಯಚಿತ್ರವನ್ನು ರಚಿಸುತ್ತ್ದಿದೆ. ನಂತರ ಅದೇ ಹವ್ಯಾಸವಾಗಿ ಹೋಯಿತು ಎಂದು ಭಟ್ ಹೇಳುತ್ತಾರೆ. ಅವರ ವ್ಯಂಗ್ಯ ಚಿತ್ರಗಳು 'ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ' ಸೇರಿದಂತೆ ರಾಜ್ಯದ ಪ್ರಮುಖ ಪತ್ರಿಕೆ ಹಾಗೂ ಮಾಸಿಕಗಳ್ಲಲಿ ಪ್ರಕಟವಾಗಿವೆ. ಕೆಲಸದ ಒತ್ತಡದ ನಡುವೆ ಸಂಗೀತಕ್ಕೆ ಸಮಯ ಮೀಸಲಿಡಲು ಸಾಧ್ಯವಾಗುತ್ತ್ಲಿಲ ಎಂಬುದನ್ನು ಮನಗಂಡಿರುವ ಭಟ್ ಈಗ ಸಂಪೂರ್ಣವಾಗಿ ವ್ಯಂಗ್ಯಚಿತ್ರದತ್ತ ಮುಖಮಾಡ್ದಿದಾರೆ.
ಐಟಿಕ್ಷೇತ್ರವನ್ನು ಗುರಿಯಾಗಿಟ್ಟುಕೊಂಡು 'ಕಾಲ್-ಟೂನ್-೨೦೦೯' ಎಂಬ ವ್ಯಂಗ್ಯ ಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡ್ದಿದಾರೆ. ಇದರ್ಲಲೇನು ವಿಶೇಷವಿದೆ ಅಂತೀರಾ? ಕ್ಯಾಲೆಂಡರ್ ಮಾರಾಟದಿಂದ ಬಂದ ಹಣವನ್ನು 'ರಾಷ್ಟ್ರೀಯ ಅಂಧರ ಒಕ್ಕೂಟ'ಕ್ಕೆ ನೀಡಲು ನಿರ್ಧರಿಸ್ದಿದಾರೆ. ಆ ಮೂಲಕ ಅಂಧರ ಬಾಳನ್ನು ಬೆಳಗಿಸಲು ತನ್ನ ಕೈಲಾದಷ್ಟು ನೆರವಾಗುವ ಉದೇಶ ಅವರದು.
ಈ ಕ್ಯಾಲೆಂಡರ್ನ್ಲಲಿರುವ ವ್ಯಂಗ್ಯ ಚಿತ್ರಗಳ್ಲಲಿನ ವಿಶೇಷವೆಂದರೆ ಅವು ರಾಜಕೀಯ ಕುರಿತಾದವುಗಳ್ಲಲ. ಐಟಿ ಕ್ಷೇತ್ರವೇ ಅದಕ್ಕೆ ಮೂಲ ವಸ್ತು. ಆರ್ಥಿಕ ಹಿಂಜರಿತ, ಭಯೋತ್ಪಾದನೆ ಸಮಸ್ಯೆ, ಯುದ್ಧ ಭಯ, ವಿಶ್ವದ ಆರ್ಥಿಕತೆ ಮುಂತಾದ ಸಮಸ್ಯೆಗಳಿಂದ ಐಟಿ ಕ್ಷೇತ್ರದ ಮೇಲಾಗುತ್ತಿರುವ ಪರಿಣಾಮ, ಅದು ಎದುರಿಸುತ್ತಿರುವ ಸಂಕಷ್ಟ, ಐಟಿ ಉದ್ಯೋಗಿಯ ಸ್ಥಿತಿ, ಇಂತಹ ಹಲವಾರು ನಿದರ್ಶನಗಳನ್ನು ಮನಸ್ಸ್ಲಿಲಿಟ್ಟುಕೊಂಡು ೧೪ ವ್ಯಂಗ್ಯ ಚಿತ್ರಗಳನ್ನು ರಚಿಸ್ದಿದಾರೆ. ಒಂದು ವ್ಯಂಗ್ಯ ಚಿತ್ರ ಇನ್ನೊಂದಕ್ಕಿಂತ ಭಿನ್ನ.
ಸಾಫ್ಟ್ವೇರ್ ಉದ್ಯೋಗಿ, ಸಂಗೀತಜ್ಞ, ವ್ಯಂಗ್ಯಚಿತ್ರಕಾರ, ಸಮಾಜ ಸೇವಕ ಹೀಗೆ ಬಹುಮುಖ ಪ್ರತಿಭಾವಂತ ಅವರು.
-ವಜ್ರಾಂಗಿ ಸೂರ್ಯ
ಭಾನುವಾರ, ಏಪ್ರಿಲ್ 12, 2009
ವಜ್ರೋತ್ತಮನ ಮನದಾಳದಿಂದ...
ಪ್ರಿಯ ಗೆಳೆಯರೇ.......
ಬಹು ಕಾಲದ ನನ್ನ ಆಸೆ ಕೊನೆಗೂ ಕೈಗೂಡುತ್ತಿದೆ..... ನನ್ನ ಮನಸಿನಲ್ಲಿ ಮೂಡುವ ಮಾತುಗಳಿಗೆ ಅಕ್ಷರ ರೂಪ ನೀಡಲು ಬ್ಲಾಗೊಂದನ್ನು ಆರಂಬಿಸುತ್ತಿದ್ದೇನೆ. ಹೆಸರು 'ವಜ್ರೋತ್ತಮನ ಮಾತು'.
ನನಗೆ ಅನಿಸಿದ್ದನ್ನು ಇಲ್ಲಿ ನಾನು ಬರೆಯುತ್ತೇನೆ......ಪ್ರತಿ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ನಾನು ಬಯಸುತ್ತೇನೆ. ನಿಮ್ಮಬೈಗುಳ ಮತ್ತು ಮೆಚ್ಚುಗೆಯನ್ನು ಸ್ವೀಕರಿಸಲು ಸನ್ನದ್ದನಾಗಿದ್ದೇನೆ........ಬರಹದಲ್ಲಿ ತಪ್ಪಿದ್ದರೆ ಅದನ್ನು ತಿದ್ದಲು ಸಲಹೆಯನ್ನು ನೀಡಿ...ನನ್ನ ತಪ್ಪನ್ನು ತಿದ್ದಲು ನೆರವಾಗಿ.... ಬವಿಷ್ಯದಲ್ಲಿ ನಾನೊಬ್ಬ ಉತ್ತಮ ಬರಹಗಾರನಾದರೆ ಅದಕ್ಕೆ ನೀವು ಕಾರಣರಾಗುತ್ತೀರಿ... ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ......

ನಿಮ್ಮವ............................
ವಜ್ರೋತ್ತಮ (ವಜ್ರಾಂಗಿ ಸೂರ್ಯ)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)